Clicky

ಹಾಸ್ಯ-54

ರೋಗಿ – ಯಾಕೋ ತುಂಬಾ ತಲೆ ನೋವು
ಡಾಕ್ಟರ್ – ಓಹೋ ಹಾಗಾದ್ರೆ ಸಿಟಿ ಸ್ಕ್ಯಾನ್ ಮಾಡಬೇಕಾಗುತ್ತದೆ
ರೋಗಿ (ಅಸಹನೆಯಿಂದ) – ರೀ ಡಾಕ್ಟ್ರೇ ನನ್ ಒಬ್ಬನ ತಲೆ ನೋವಿಗೆ ಪೂರ್ತಿ ಸಿಟಿನೆಲ್ಲಾ ಯಾಕೆ ಸ್ಕ್ಯಾನ್ ಮಾಡ್ಬೇಕು?
???? ????


_————
ಗಂಡ ಹೆಂಡತಿ ಮಲಗಲು ಹಾಸಿಗೆಗೆ ಹೋಗುವ ಮುನ್ನ ವಿವಿಧ ದೇಶ ಗಳಲ್ಲಿ ಪರಸ್ಪರ ವಿನಿಮಯ ಮಾಡಿ ಕೊಳ್ಳುವ ವಿಧಾನ,
????ಅಮೇರಿಕದಲ್ಲಿ:ಗುಡ್ ನೈಟ್ ಡಾರ್ಲಿಂಗ್.
????ಜಪಾನ ನಲ್ಲಿ :ಗುಡ್ ನೈಟ್ ಮೈ ಲವ್.
????ರಷ್ಯಾ ದಲ್ಲಿ ಸ್ವೀಟ್ ಡ್ರೀಮ್ಸ್ ಡಾರ್ಲಿಂಗ್.
????ಭಾರತ ದಲ್ಲಿ : ಸಿಲಿಂಡರ್ ಆಫ್ ಮಾಡಿದ್ದಿಯಾ?ದೋಸೆ ಹಿಟ್ಟು  ಫ್ರಿಜ್ ನಲ್ಲಿ ಇಟ್ಟ್ಯ..ಬಾತ್ ರೂಮ್ ಲೈಟ್ ಆಫ್ ಮಾಡಿದ್ಯಾ.??
ಸರಿ ಬಿದ್ಕೊ! ????????????


≠======{{
????????????????????????????????
*ಮೊಸರನ್ನು ಈ 10 ಪದಾರ್ಥಗಳೊಂದಿಗೆ ಪ್ರತ್ಯೇಕವಾಗಿ ಬೆರೆಸಿಕೊಂಡು ತಿನ್ನಿ, ಅದ್ಭುತ ಫಲಿತಾಂಶ ಪಡೆಯಿರಿ.*
????????????????????????????????
*ಹಾಲಿನಿಂದ ತಯಾರಿಸುವ ಮೊಸರೆಂದರೆ ಬಹಳಷ್ಟು ಮಂದಿಗೆ ಇಷ್ಟ. ಕೆಲವರಂತೂ ಊಟದ ಬಳಿಕ ಮೊಸರು ತಿನ್ನದಿದ್ದರೆ ಅವರಿಗೆ ಪರಿಪೂರ್ಣ ತೃಪ್ತಿ ಸಿಗಲ್ಲ. ಭೋಜನ ಅಸಂಪೂರ್ಣವಾಗಿ ಮುಗಿದಂತೆ ಭಾವಿಸುತ್ತಾರೆ. ಆ ಮಾತು ಬಿಡಿ, ಮೊಸರಿನಿಂದ ನಮಗೆ ಅನೇಕ ವಿಧವಾದ ಲಾಭಗಳಿವೆ. ಈ ವಿಷಯ ಎಲ್ಲರಿಗೂ ಗೊತ್ತಿರುವುದೇ. ಮೊಸರಿನೊಂದಿಗೆ ಕೆಲವು ಆಹಾರ ಪದಾರ್ಥಗಳನ್ನು ಬೆರೆಸಿಕೊಂಡು ತಿಂದರೆ ಹಲವು ವಿಧದ ಅನಾರೋಗ್ಯ ಸಮಸ್ಯೆಗಳು ಸುಲಭವಾಗಿ ದೂರವಾಗುತ್ತವೆ. ಆ ಆಹಾರ ಯಾವುದು ಎಂದು ಈಗ ತಿಳಿದುಕೊಳ್ಳೋಣ ಬನ್ನಿ.*
*????1. ಸ್ವಲ್ಪ ಜೀರಿಗೆ ತೆಗೆದುಕೊಂಡು ಪುಡಿ ಮಾಡಿ ಅದನ್ನು ಒಂದು ಕಪ್ ಮೊಸರಿನಲ್ಲಿ ಬೆರೆಸಿಕೊಂಡು ತಿಂದರೆ ಶೀಘ್ರವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.*
*????2. ಸ್ವಲ್ಪ ಕಪ್ಪು ಉಪ್ಪನ್ನು ತೆಗೆದುಕೊಂಡು ನುಣ್ಣಗೆ ಮಾಡಿಕೊಳ್ಳಿ. ಅದನ್ನು ಒಂದು ಕಪ್ ಮೊಸರಿನೊಂದಿಗೆ ಬೆರೆಸಿಕೊಂಡು ಕುಡಿಯಬೇಕು. ಇದರಿಂದ ಜೀರ್ಣ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಮುಖ್ಯವಾಗಿ ಗ್ಯಾಸ್, ಅಸಿಡಿಟಿಯಂತಹವು ಕಡಿಮೆಯಾಗುತ್ತವೆ.*
*????3. ಸ್ವಲ್ಪ ಮೊಸರಿನೊಂದಿಗೆ ಸಕ್ಕರೆ ಬೆರೆಸಿಕೊಂಡು ತಿನ್ನಬೇಕು. ಇದರಿಂದ ದೇಹಕ್ಕೆ ಕೂಡಲೆ ಶಕ್ತಿ ಸಿಗುತ್ತದೆ. ಮೂತ್ರಕೋಶದ ಸಮಸ್ಯೆಗಳು ದೂರವಾಗುತ್ತವೆ.*
*????4. ಸ್ವಲ್ಪ ಓಂಕಾಳನ್ನು ತೆಗೆದುಕೊಂಡು ಒಂದು ಕಪ್ ಮೊಸರಿನೊಂದಿಗೆ ಬೆರೆಸಿ ತಿನ್ನಬೇಕು. ಇದರಿಂದ ಬಾಯಿಹುಣ್ಣು, ಹಲ್ಲುನೋವು, ಇತರೆ ದಂತ ಸಂಬಂಧಿ ಸಮಸ್ಯೆಗಳು ನಿವಾರಣೆಯಾಗುತ್ತವೆ.*
*????5. ಒಂದು ಕಪ್ಪು ಮೊಸರಿನೊಂದಿಗೆ ಸ್ವಲ್ಪ ಕಪ್ಪು ಮೆಣಸಿನ ಪುಡಿಯನ್ನು ಬೆರೆಸಿ ತಿನ್ನಬೇಕು. ಇದರಿಂದ ಮಲಬದ್ಧತೆ ದೂರವಾಗುತ್ತದೆ. ತಿಂದ ಆಹಾರ ಸರಿಯಾಗಿ ಪಚನವಾಗುತ್ತದೆ.*
*????6. ಮೊಸರಿನಲ್ಲಿ ಸ್ವಲ್ಪ ಓಟ್ಸ್ ಬೆರೆಸಿ ತಿನ್ನಬೇಕು. ಹೀಗೆ ಮಾಡುವುದರಿಂದ ಒಳ್ಳೇ ಪ್ರೋಬಯೋಟಿಕ್ಸ್, ಪ್ರೋಟೀನ್ ಲಭಿಸುತ್ತದೆ. ಇವು ಮಾಂಸಖಂಡಗಳ ಶಕ್ತಿಗೆ ಸಹಾಯಕಾರಿ.*
*????7. ಮೊಸರಿನೊಂದಿಗೆ ವಿವಿಧ ರೀತಿಯ ಹಣ್ಣುಗಳನ್ನು ಬೆರೆಸಿಕೊಂಡು ತಿಂದರೆ ಶರೀರ ರೋಗನಿರೋಧಕ ಶಕ್ತಿ ಹೆಚ್ಚುತ್ತೆ. ಹಲವು ವಿಧದ ಇನ್‌ಫೆಕ್ಷನ್‌ಗಳು, ರೋಗಗಳು ಬರದಂತೆ ನೋಡಿಕೊಳ್ಳಬಹುದು.*
*????8. ಮೊಸರಿನೊಂದಿಗೆ ಸ್ವಲ್ಪ ಅರಿಶಿಣ, ಸ್ವಲ್ಪ ಶುಂಠಿ ಬೆರೆಸಿ ತಿನ್ನಬೇಕು. ಇದರಿಂದ ಫೋಲಿಕ್ ಆಸಿಡ್ ಶರೀರಕ್ಕೆ ಸೇರುತ್ತದೆ. ಇದು ಚಿಕ್ಕಮಕ್ಕಳಿಗೆ, ಗರ್ಭಿಣಿಯರಿಗೆ ಎಷ್ಟೋ ಉಪಯುಕ್ತ.*
*????9. ಮೊಸರಿನೊಂದಿಗೆ ಆರೆಂಜ್ ಜ್ಯೂಸ್ ಬೆರೆಸಿಕೊಂಡು ತಿನ್ನಬೇಕು. ಇದರಿಂದ ಶರೀರಕ್ಕೆ ಸಾಕಷ್ಟು ವಿಟಮಿನ್ ಸಿ ಲಭ್ಯವಾಗುತ್ತದೆ. ಇದು ಕೀಲು ನೋವು ಕಡಿಮೆ ಮಾಡುತ್ತೆ. ವೃದ್ಧಾಪ್ಯ ಸಮಸ್ಯೆಗಳನ್ನು ದೂರ ಮಾಡುತ್ತದೆ.*
*????10. ಮೊಸರಿನೊಂದಿಗೆ ಜೇನುತುಪ್ಪ ಬೆರೆಸಿ ತಿಂದರೆ ಹೊಟ್ಟೆಯಲ್ಲಿನ ಅಲ್ಸರ್ ಮಾಯವಾಗುತ್ತದೆ. ಈ ಮಿಶ್ರಣ ಆಂಟಿಬಯೋಟಿಕ್ ಆಗಿ ಕೆಲಸ ಮಾಡುತ್ತದೆ. ಇದರಿಂದ ದೇಹದಲ್ಲಿನ ಇನ್‌‍ಫೆಕ್ಷನ್ ಕೂಡಲೆ ಕಡಿಮೆಯಾಗುತ್ತದೆ*
????????????????????????????????
*ಎಚ್✍????*


—–++
ನಮ್ಮ ಬೋರೆಗೌಡ ಲಂಡನ್‍ನ ಶ್ರೀಮಂತ ಕಾಲೋನಿಯಲ್ಲಿ ಮನೆ ಮಾಡಿದ..????
ಬರೀ ಕ್ರಿಶ್ಚಿಯನ್ನರು. ನಮ್ಮ ಬೋರೇಗೌಡನಿಗೆ ದಿನಾ ಕೋಳಿ ತಿನ್ನುವ ಅಭ್ಯಾಸ.!! ಅಲ್ಲಿ ನೋಡಿದರೆ ಪಾಪ ಆ ಕಾಲೋನಿಯ ಜನರೆಲ್ಲಾ ಅದೆಂತದೋ ಏಸುವಿನ ಸಸ್ಯಾಹಾರಿ ವ್ರತ ಮಾಡುತ್ತಿದ್ದರು..!!
ಒಂದು ತಿಂಗಳು ಮಾಂಸ ತಿನ್ನುವ ಹಾಗಿಲ್ಲ.????????????
ನಮ್ಮ ಬೋರೇಗೌಡನ ಮನೆಯಿಂದ ದಿನಾ ಮಸಾಲೆ ವಾಸನೆ. ಕಡೆಗೆ ತಡೆಯಲಾರದೆ ನೇರವಾಗಿ ಪೋಪ್‍ಗೆ ದೂರು ನೀಡಿದರು.????????
ಪೋಪ್ ಬಂದು ತನ್ನ ಅನುಯಾಯಿಗಳ ಪರವಾಗಿ ಮಾತನಾಡಿದರು. ನೀನು ಏಕೆ ನಮ್ಮ ಮತಕ್ಕೆ ಸೇರಬಾರದು ಎಂದು ಅವನ ಮನವೊಲಿಸಿದರು.
ನಮ್ಮ ಬೋರೆಗೌಡ ಒಪ್ಪಿಕೊಂಡ.!!
ಪೋಪ್ ಅವನ ತಲೆಯ ಮೇಲೆ ನೀರು ಸುರಿದು, “ನೀನು ಹುಟ್ಟಿದ್ದು ಹಿಂದುವಾಗಿ, ಬೆಳೆದದ್ದೂ ಹಿಂದುವಾಗಿ, ಆದರೆ ಇನ್ನ ಮೇಲೆ ನೀನು ಕ್ರಿಶ್ಚಿಯನ್” ಎಂದರು. ಕಾಲೋನಿಯ ಜನ ನಿಟ್ಟುಸಿರುಬಿಟ್ಟರು….
ಮಾರನೆಯ ದಿನ ಮತ್ತೆ ಬೋರೆಗೌಡನ ಮನೆಯಿಂದ ಮಸಾಲೆ ಘಾಟು..!!???? ಕಾಲೋನಿಯ ಜನ ಗಾಬರಿಯಾದರು. ಮತ್ತೆ ಪೋಪ್‍ಗೆ ಕರೆ ಹೋಯಿತು. ಪೋಪ್ ಬಂದು ನೋಡಿದರೆ ಬೋರೆಗೌಡ ಕೋಳಿಯೊಂದನ್ನು ಹಿಡಿದುಕೊಂಡು ಅದರ ಮೇಲೆ ನೀರು ಸುರಿಯುತ್ತಿದ್ದಾನೆ.!!???????? “ನೀನು ಹುಟ್ಟಿದ್ದು ಕೋಳಿಯಾಗಿ, ಬೆಳೆದದ್ದೂ ಕೋಳಿಯಾಗಿ, ಆದರೆ ನೀನಿಗ ಆಲೂಗಡ್ಡೆ”..!!????????????????
ಪೋಪ್ ಅಲ್ಲೆ ಸುಸ್ತು……!!???????????? don’t play with Indians
—-+–+–


“ತಿನ್ನುವ ಅನ್ನ ಕೈತಪ್ಪಿ ಅಂಗಿ ಮೇಲೆ ಬಿದ್ದರೆ..,
“oh..shit” ಅಂತ ಸಿಂಕ್ ಹತ್ರ ಹೋಗಿ ನಾಜೂಕಾಗಿ ಅಂಗಿ ಒರೆಸಿಕೊಂಡವನಿಗೆ..,
ಅಂಗಿಯ ಬೆಲೆ ಗೊತ್ತಿತ್ತು…ಚೆಲ್ಲಿದ ಅನ್ನದ ಬೆಲೆ ಗೊತ್ತಿರಲಿಲ್ಲ..”
        *????ಶುಭೋದಯ????*
        *???? ಸುದಿನಮಸ್ತು ????*

2 thoughts on “ಹಾಸ್ಯ-54”

Leave a Comment

Facebook