Clicky

ನುಡಿ ಮುತುಗಳು

???? ಬಂಗಾರದಂಥ ಮಾತು????

ನನಗೆ 6 ವರ್ಷವಿದ್ದಾಗ
ಅರೆ,ಅಪ್ಪನಿಗೆ ಎಷ್ಟೋಂದು ವಿಷಯ ಗೊತ್ತಲ್ವಾ !
ಎಂದು ಆಗ ಅನಿಸುತ್ತಿತ್ತು.

# 10 ನೇ ವರ್ಷಕ್ಕೆ ಕಾಲಿಟ್ಟಾಗ
ಅಪ್ಪ ಒಂಥರಾ ಸಿಡುಕನಂತೆ ಕಂಡ

# 12 ನೇ ವಯಸ್ಸಿನಲ್ಲಿ ಹಿಂತಿರುಗಿ ನೋಡಿದಾಗ
ಬಾಲ್ಯದ ಅಪ್ಪ ಕಳೆದು ಹೋದ ಅನ್ನಿಸುತ್ತಿತ್ತು

# 16 ನೇ ವಯಸ್ಸಿಗೆ ಬಂದಾಗಂತೂ
ಉಫ್ ! ಅಪ್ಪನನ್ನು ಮೆಚ್ಚಿಸಲು ಆಗಲೇ ಇಲ್ಲ

# 19 ನೇ ವಯಸ್ಸಿನಲ್ಲಿ
ಅಪ್ಪನಿಗೂ ನನಗೂ ಸಣ್ಣ ಜಗಳವಾಯ್ತು

# 21 ಕ್ಕೆ ಬಂದೆನಾ
ಅಪ್ಪ ವಿಪರೀತ ಬಿಗಿಯಾದವನಂತೆ,
ತೀರಾ ಒರಟನಂತೆ ಕಂಡ.

# 22 ನೇ ವಯಸ್ಸಿನಲ್ಲಿ
ಅಂದುಕೊಂಡೆ, ಅಪ್ಪನಿಗೆ ಗೊತ್ತಿರುವಷ್ಟೇ
ನನಗೂ ಗೊತ್ತಿದೆ. ಅವನೇನು ಮಹಾ ?

25 ನೇ ವಯಸ್ಸಿಗೆ, “ನಾನು ಸಾಕಷ್ಟು ತಿಳಿದುಕೊಂಡವನು ; ಅಪ್ಪ ಮಂಕುಬೂದಿ, ಅವನಿಗೇನು ಗೊತ್ತು ?” ಅಂದುಕೊಂಡೆ.

# 30 ರಲ್ಲಿದ್ದಾಗ
ಮದುವೆಯಾದೆ, ಆ ಸಂದರ್ಭದಲ್ಲಿ ಎಷ್ಟೋ ವಿಷಯಗಳಲ್ಲಿ ಅಪ್ಪನಿಗೂ ನನಗೂ ಹೊಂದಾಣಿಕೆಯೇ ಇರಲಿಲ್ಲ. ಈ ಮುದುಕರಿಗೆ Common Sense ಅನ್ನೋದೇ ಇರೋದಿಲ್ಲ ಎನ್ನಿಸುತ್ತಿತ್ತು.

# 35 ನೇ ವಯಸ್ಸಿನಲ್ಲಿ
ನನ್ನ ಮಗ/ಮಗಳ ರಂಪ ಕಂಡು
ತಲೆ ಚಿಟ್ಟು ಹಿಡಿಯಿತು.

# 39 ರಲ್ಲಿದ್ದಾಗ
ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಟ್ಟೆ,
ಅಪ್ಪ ನೆನಪಾದ.

# 42 ನೇ ವಯಸ್ಸಿನಲ್ಲಿ ಅನಿಸಿದ್ದು,
ಅಪ್ಪನಂತೆ ಬಿಗಿಯಾಗದೆ ಹೋದ್ರೆ ಮಕ್ಕಳು ಬಗ್ಗಲ್ಲ.

# 45 ರ ವಯಸ್ಸಲ್ಲಿ
ನನ್ನನ್ನು ಸಾಕಲು ಅಪ್ಪನಿಗೆ ಎಷ್ಟೋಂದು ಕಷ್ಟ ಆಯ್ತೋ ಅಂದುಕೊಂಡೆ.

# 50 ರಲ್ಲಿದ್ದಾಗ
ಅನ್ನಿಸಿತು : ಇಷ್ಟು ದೊಡ್ಡ ಸಂಬಳ ಇಟ್ಟುಕೊಂಡು 2 ಮಕ್ಕಳನ್ನ ಸಾಕೋದೆ ಕಷ್ಟ, ಆಗ ಅತೀ ಕಡಿಮೆ ಸಂಬಳದಲ್ಲಿ ಅಪ್ಪ 4 ಮಕ್ಕಳನ್ನು ಹೇಗೆ ಸಾಕಿದ ?

# 58 ನೇ ವಯಸ್ಸಿನಲ್ಲಿ
ಮಕ್ಕಳು ನನ್ನನ್ನೇ ಹೀನಾಯವಾಗಿ ನಿಂದಿಸಿದರು. ಅಪ್ಪನ ನೆನೆದು ಅಳು ಬರುತ್ತಿತ್ತು

# ಕಡೆಗೂ ಹಳೆಯದೆಲ್ಲಾ ನೆನಪಾಗಿ, ಗೋಡೆಯ ಮೇಲಿನ ಚಿತ್ರವಾಗಿದ್ದ ಅಪ್ಪನ ಫೋಟೋ ಮುಂದೆ ನಿಂತು, # ಅಪ್ಪಾ U R ಗ್ರೇಟ್ #
ಅಂದಾಗ, ನನಗೆ 60 ವರ್ಷ ತುಂಬಿತ್ತು.

# ಅಪ್ಪನ ಮಹತ್ವ ತಿಳಿಯಲು 54 ವರ್ಷಗಳೇ ಬೇಕಾಯ್ತು

ಖ್ಯಾತ ಲೇಖಕರಾದ:
ಶ್ರೀ ಮಣಿಕಾಂತ ಅವರ “ಅಪ್ಪ ಅಂದ್ರೆ ಆಕಾಶ”
ಪುಸ್ತಕದಿಂದ ಪಡೆದದ್ದು.

Leave a Comment

Facebook